
ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಜಿಯೋ ಪ್ಲಾಟ್ಫಾರ್ಮ್ಸ್ ಸಂಸ್ಥೆಯ 30,213 ಕೋಟಿ ರೂ ಮೊತ್ತದ ಐಪಿಒ ಮುಕ್ತಾಯಕ್ಕೂ ಮುನ್ನವೇ ಭಾರೀ ಸ್ಪಂದನೆ ಪಡೆದಿದ್ದು, ಭಾರತದ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಎನಿಸಿದೆ.
ಈ ಐಪಿಒದಲ್ಲಿ ಒಟ್ಟು 27 ಕೋಟಿ ಷೇರುಗಳನ್ನು ವಿತರಿಸಲಾಗುತ್ತಿದ್ದು, ಆಂಕರ್ ಇನ್ವೆಸ್ಟರ್ ಕೆಟಗರಿಗೆ ಮೀಸಲಿರಿಸಿದ 8,110 ಕೋಟಿ ರೂ ಮೊತ್ತಕ್ಕೆ 30 ಪಟ್ಟು ಹೆಚ್ಚು ಬಿಡ್ಡಿಂಗ್ ಸಲ್ಲಿಕೆಯಾಗಿದೆ.
ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒದ ಆಂಕರ್ ಇನ್ವೆಸ್ಟರ್ಸ್ ಕೆಟಗರಿಯಲ್ಲಿ ಕೇವಲ 100 ನಿಮಿಷಗಳ ಅವಧಿಯೊಳಗೆ ಪೂರ್ಣ ಸಬ್ಸ್ಕ್ರಿಪ್ಷನ್ ಮುಟ್ಟಿ ದಾಖಲೆ ಬರೆದಿದೆ.