
ಬೆಂಗಳೂರು ಮೆಟ್ರೋ ಹಂತ-1 ಮತ್ತು ಹಂತ-2ರ ಯೋಜನೆಗಳಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯದ ಗುರಿ ಸಾಧನೆಯಲ್ಲಿ ಭಾರಿ ಅಂತರವಿದ್ದು, ಸಿಎಜಿ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.
2016-17ರಿಂದ 2022-23ರ ಅವಧಿಯಲ್ಲಿ ₹7,736.70 ಕೋಟಿ ಆದಾಯದ ನಿರೀಕ್ಷೆ ಇದ್ದರೂ, ಕೇವಲ ₹1,758.13 ಕೋಟಿ ಅಂದರೆ 22.72% ಮಾತ್ರ ಸಂಗ್ರಹವಾಗಿದೆ.
ಭೂಸ್ವಾಧೀನ ವೆಚ್ಚದಲ್ಲಿ ₹6,603.39 ಕೋಟಿ ಹೆಚ್ಚಳವಾಗಿದ್ದು, ವಿಳಂಬದಿಂದಾಗಿ ಹೆಚ್ಚುವರಿ ₹186.86 ಕೋಟಿ ಬಡ್ಡಿ ಮತ್ತು ₹294.72 ಕೋಟಿ ಹೆಚ್ಚುವರಿ ಪರಿಹಾರ ಪಾವತಿಸಬೇಕಾಗಿದೆ.