Health & Environment
ಮಡಿಕೇರಿ: ತಾಯಿಯ ಶವದ ಬಳಿ ಮರಿ ಆನೆಯ ಮೂಕರೋಧನೆ

ಮಡಿಕೇರಿ: ತಾಯಿಯ ಶವದ ಬಳಿ ಮರಿ ಆನೆಯ ಮೂಕರೋಧನೆ

tv9kannada21h
THE BRIEF
1

ಕೊಡಗಿನ ಅಮ್ಮತಿ ಸಮೀಪದ ಕಾಫಿ ಎಸ್ಟೇಟ್‌ನಲ್ಲಿ 30 ವರ್ಷದ ಹೆಣ್ಣು ಆನೆಯೊಂದು ಮೃತಪಟ್ಟಿದ್ದು, ಅದರ ಮರಿ ಆನೆಯು ತಾಯಿಯ ದೇಹವನ್ನು ಬಿಟ್ಟು ಹೋಗಲು ನಿರಾಕರಿಸಿದೆ.

2

ಪಶುವೈದ್ಯರ ಪ್ರಾಥಮಿಕ ವರದಿಯಂತೆ, ಆನೆಯ ಬೆನ್ನುಮೂಳೆಗೆ ತೀವ್ರ ಗಾಯವಾಗಿ ಆಂತರಿಕ ರಕ್ತಸ್ರಾವದಿಂದ ಸಾವು ಸಂಭವಿಸಿದೆ ಎಂದು ಅರಣ್ಯ ಇಲಾಖೆ ದೃಢಪಡಿಸಿದೆ.

3

ಅರಣ್ಯ ಇಲಾಖೆಯ ಸಿಬ್ಬಂದಿ ಬಲೆ ಬಳಸಿ ಮರಿ ಆನೆಯನ್ನು ಸೆರೆಹಿಡಿದು ಪಕ್ಕಕ್ಕೆ ಕಟ್ಟಿಹಾಕಿದ ನಂತರವೇ ತಾಯಿಯ ಅಂತ್ಯಕ್ರಿಯೆ ನಡೆಸಲಾಗಿದೆ.