
ಪ್ರಮುಖ ಸಣ್ಣ ಹಣಕಾಸು ಬ್ಯಾಂಕ್ಗಳು ಹಿರಿಯ ನಾಗರಿಕರಿಗೆ 5 ವರ್ಷದ ಅವಧಿಯ ಸ್ಥಿರ ಠೇವಣಿಗಳ (ಎಫ್ಡಿ) ಮೇಲೆ 3 ಕೋಟಿ ರೂ.ವರೆಗಿನ ಮೊತ್ತಕ್ಕೆ ಶೇ 8.5ರವರೆಗೆ ಬಡ್ಡಿದರ ನೀಡುತ್ತಿವೆ.
ಹೂಡಿಕೆದಾರರು ಸಂಭಾವ್ಯ ಅಪಾಯವನ್ನು ತಡೆಯಲು ಡಿಐಸಿಜಿಸಿ ವಿಮಾ ವ್ಯಾಪ್ತಿಯಡಿ ಬರುವ 5 ಲಕ್ಷ ರೂಪಾಯಿ ವರೆಗೆ ಮಾತ್ರ ಸಣ್ಣ ಹಣಕಾಸು ಬ್ಯಾಂಕ್ಗಳ ಎಫ್ಡಿಯಲ್ಲಿ ಹೂಡಿಕೆ ಮಾಡುವುದು ಸೂಕ್ತವಾಗಿದೆ.
ಹೊಸ ತೆರಿಗೆ ಪದ್ಧತಿಯಡಿ 2025-26ನೇ ಹಣಕಾಸು ವರ್ಷದಲ್ಲಿ 12 ಲಕ್ಷ ರೂಪಾಯಿ ವರೆಗೆ ಆದಾಯ ಹೊಂದಿರುವವರಿಗೆ ಸೆಕ್ಷನ್ 87ಎ ಅಡಿಯಲ್ಲಿ ತೆರಿಗೆ ರಿಯಾಯಿತಿ ಅನ್ವಯಿಸಲಿದೆ.