
ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು 8 ಮಕ್ಕಳು ಗಾಯಗೊಂಡ ಪ್ರಕರಣದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕ ಸಿ.ಬಿ.ಹೆಳವರ ಅವರನ್ನು ಅಮಾನತುಗೊಳಿಸಲಾಗಿದೆ.
ಕಟ್ಟಡದ ಫಿಟ್ನೆಸ್ ಪ್ರಮಾಣಪತ್ರ ನೀಡುವಲ್ಲಿ ವಿಫಲರಾದ ಪಿಆರ್ಇಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ಎಂ.ರೇವಡಿ ಮತ್ತು ಜ್ಯೂನಿಯರ್ ಇಂಜಿನಿಯರ್ ಎಸ್.ಎಂ.ಸಂಗನಾಳ ಅವರನ್ನು ಜಿಲ್ಲಾಪಂಚಾಯಿತಿ ಸಿಇಓ ಗಜಾನನ ಬಾಲೆ ಅಮಾನತು ಮಾಡಿದ್ದಾರೆ.
ಸೆಪ್ಟೆಂಬರ್ 2ರಂದು ತರಗತಿ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಜಿಲ್ಲೆಯಲ್ಲಿ ಈ ಹಿಂದೆ ಗುರುತಿಸಲಾದ 628 ಅನ್ಫಿಟ್ ಶಾಲೆಗಳ ಪಟ್ಟಿಯಲ್ಲಿ ಈ ಶಾಲೆಯ ಹೆಸರು ಇರಲಿಲ್ಲ ಎಂಬುದು ಗಮನಾರ್ಹ.