
ಜುಲೈ ತಿಂಗಳಲ್ಲಿ ದೇಶದ ಒಟ್ಟು ಜಿಎಸ್‌ಟಿ ಸಂಗ್ರಹವು ₹2.11 ಲಕ್ಷ ಕೋಟಿಗೆ ತಲುಪಿದ್ದು, ಇದು ಪ್ರಸಕ್ತ ಆರ್ಥಿಕ ವರ್ಷದ ಎರಡನೇ ಅತಿಹೆಚ್ಚಿನ ವರಮಾನವಾಗಿದೆ.
ಕಳೆದ ವರ್ಷದ ಜುಲೈನಲ್ಲಿ ₹1.83 ಲಕ್ಷ ಕೋಟಿ ಸಂಗ್ರಹವಾಗಿದ್ದು, ಈ ಬಾರಿ ಶೇ 15.4ರಷ್ಟು ಏರಿಕೆ ದಾಖಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆಂತರಿಕ ವಹಿವಾಟಿನಿಂದ ₹1.44 ಲಕ್ಷ ಕೋಟಿ ಹಾಗೂ ಆಮದು ಸರಕುಗಳಿಂದ ₹66,511 ಕೋಟಿ ವರಮಾನ ಬಂದಿದ್ದು, ಏಪ್ರಿಲ್‌ನಿಂದ ಜುಲೈವರೆಗೆ ಒಟ್ಟು ₹8.43 ಲಕ್ಷ ಕೋಟಿ ಸಂಗ್ರಹವಾಗಿದೆ.