
ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ವೈರಲ್ ಫ್ಲೂ, ಎಚ್1ಎನ್1 ಮತ್ತು ಉಸಿರಾಟದ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಏರಿಕೆಯಾಗಿದೆ.
ಕಳೆದ ಒಂದು ವಾರದಲ್ಲಿ 571 ಜನರಲ್ಲಿ ವೈರಲ್ ಇನ್ಫ್ಲುಯೆಂಜಾ, 344 ಜನರಲ್ಲಿ ತೀವ್ರ ಉಸಿರಾಟದ ಸೋಂಕು ಮತ್ತು 3,232 ಜನರಲ್ಲಿ ವಾಂತಿಭೇದಿ ಪ್ರಕರಣಗಳು ಪತ್ತೆಯಾಗಿವೆ.
ಮಕ್ಕಳಲ್ಲಿ ಸೋಂಕು ವೇಗವಾಗಿ ಹರಡುತ್ತಿದ್ದು, ಜ್ವರದ ಲಕ್ಷಣಗಳಿದ್ದರೆ ಶಾಲೆಗೆ ಕಳುಹಿಸದಂತೆ ಮತ್ತು ಸ್ವಯಂ ಚಿಕಿತ್ಸೆ ಪಡೆಯದೆ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.