
ಒಟ್ಟು 30,213 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿರುವ ಜಿಯೊ ಪ್ಲಾಟ್‌ಫಾರ್ಮ್ಸ್ ಕಂಪನಿಯ ಐಪಿಒಗೆ ಮೊದಲ ದಿನವೇ ಭರ್ಜರಿ ಸ್ಪಂದನೆ ದೊರೆತಿದೆ.
ಆರಂಭಿಕ ಹೂಡಿಕೆದಾರರಿಗೆ ಮೀಸಲಾದ ಪಾಲು ಸೇರಿದಂತೆ 74,610 ಕೋಟಿ ಮೊತ್ತದ ಷೇರುಗಳಿಗೆ ಬುಧವಾರ ಮೊದಲ ದಿನವೇ ಬೇಡಿಕೆ ಬಂದಿದೆ.
ಕಂಪನಿಯು ಹೊಸದಾಗಿ 27 ಕೋಟಿ ಷೇರುಗಳನ್ನು ಖರೀದಿಗೆ ಬಿಡುಗಡೆ ಮಾಡುತ್ತಿದ್ದು, ಸಂಗ್ರಹವಾಗುವ ಮೊತ್ತವು ಕಂಪನಿಯ ಖಾತೆಗೆ ಸೇರಲಿದೆ.