International
ವಿಮಾನ ಟಿಕೆಟ್ ಕೊಡಿಸುವ ನೆಪದಲ್ಲಿ ಚಿನ್ನಾಭರಣ ದರೋಡೆ

ವಿಮಾನ ಟಿಕೆಟ್ ಕೊಡಿಸುವ ನೆಪದಲ್ಲಿ ಚಿನ್ನಾಭರಣ ದರೋಡೆ

prajavani1h
THE BRIEF
1

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 70 ಗ್ರಾಂ ಚಿನ್ನಾಭರಣ ಹಾಗೂ 18 ಸಾವಿರ ರೂಪಾಯಿ ನಗದು ಪಡೆದು ಅಪರಿಚಿತ ವ್ಯಕ್ತಿಯೊಬ್ಬ ಪರಾರಿಯಾಗಿದ್ದಾನೆ.

2

ದಾವಣಗೆರೆಯ ಟಿ.ಪುಷ್ಪಾ ಎಂಬುವವರು ರಾಜಸ್ಥಾನಕ್ಕೆ ತೆರಳಲು ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿದ್ದಾಗ ಪರಿಚಿತನಾದ ಆರೋಪಿಯು ವಿಮಾನ ನಿಲ್ದಾಣದ ಸಿಬ್ಬಂದಿ ಎಂದು ಪರಿಚಯಿಸಿಕೊಂಡು ವಂಚಿಸಿದ್ದಾನೆ.

3

ಭದ್ರತಾ ತಪಾಸಣೆಯಲ್ಲಿ ಚಿನ್ನಾಭರಣ ಧರಿಸಲು ಅವಕಾಶವಿಲ್ಲ ಎಂದು ನಂಬಿಸಿ ಬ್ಯಾಗ್ ಪಡೆದ ಆತ ಹಣ ತರುವುದಾಗಿ ಹೇಳಿ ನಾಪತ್ತೆಯಾಗಿದ್ದು, ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.