
ಬಾಕುದಲ್ಲಿ ನಡೆದ ಫಿಫಾ 15 ವರ್ಷದೊಳಗಿನವರ ವಿಶ್ವಕಪ್ ಉತ್ಸವದಲ್ಲಿ ಭಾರತ ತಂಡವು 1–2 ಅಂತರದಿಂದ ಅಫ್ಗಾನಿಸ್ತಾನಕ್ಕೆ ಸೋತಿದೆ.
ಅಫ್ಗಾನಿಸ್ತಾನದ ಪರ ಮೊಹಮ್ಮದ್ ಮುಸ್ತಾಫಾ ಮತ್ತು ಶಹಝಾದಾ ಸುಲ್ತಾನಿ ಗೋಲುಗಳನ್ನು ಗಳಿಸಿದರೆ, ಭಾರತದ ಪರ ನಿಭಾಸ್ ಮೈತೇಯಿ ವಹೆಂಗ್ಬಾಮ್ ಏಕೈಕ ಗೋಲು ಗಳಿಸಿದರು.
ಭಾರತ ತನ್ನ ಮುಂದಿನ ಪಂದ್ಯದಲ್ಲಿ ಕಜಾಕಸ್ತಾನ ತಂಡವನ್ನು ಎದುರಿಸಲಿದ್ದು, ಈ ಪಂದ್ಯವು 85 ರಿಂದ 88ನೇ ಸ್ಥಾನಕ್ಕಾಗಿ ನಡೆಯಲಿದೆ.