
ತಮಿಳುನಾಡಿಗೆ ತಕ್ಷಣ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಡಿಎಂಕೆ ಪಕ್ಷವು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಜುಲೈ 26ರೊಳಗೆ ಉಂಟಾದ 9.46 ಟಿಎಂಸಿ ನೀರಿನ ಕೊರತೆಯನ್ನು ನೀಗಿಸಲು ಮುಂದಿನ 15 ದಿನಗಳವರೆಗೆ ಪ್ರತಿದಿನ 7,000 ಕ್ಯೂಸೆಕ್ ನೀರು ಹರಿಸಬೇಕೆಂದು ಅರ್ಜಿಯಲ್ಲಿ ಬೇಡಿಕೆ ಇಡಲಾಗಿದೆ.
ಮೆಟ್ಟೂರು ಜಲಾಶಯವನ್ನು ಅವಲಂಬಿಸಿರುವ 14.913 ಲಕ್ಷ ಎಕರೆ ಕೃಷಿ ಭೂಮಿ ಮತ್ತು 40 ಲಕ್ಷ ರೈತರ ಹಿತದೃಷ್ಟಿಯಿಂದ ಈ ಕ್ರಮ ಅಗತ್ಯವೆಂದು ಡಿಎಂಕೆ ವಾದಿಸಿದೆ.