
ಫ್ರಾನ್ಸ್‌ನ ಗಿರೊಂಡೆ ಪ್ರಾಂತ್ಯದಲ್ಲಿ ಕಾಡ್ಗಿಚ್ಚು ತೀವ್ರಗೊಂಡಿದ್ದು, ಪ್ಯಾರಿಸ್‌ಗಿಂತ ನಾಲ್ಕು ಪಟ್ಟು ದೊಡ್ಡ ಪ್ರದೇಶ ಆಹುತಿಯಾಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ತುರ್ತು ಸಭೆ ನಡೆಸಿದ್ದಾರೆ.
ಕಾಡ್ಗಿಚ್ಚಿನಿಂದಾಗಿ ಈಗಾಗಲೇ 2.50 ಲಕ್ಷ ಮಂದಿ ತಮ್ಮ ಮನೆಗಳನ್ನು ತೊರೆದಿದ್ದು, ಮಂಗಳವಾರದಿಂದ ತಾಪಮಾನ ಏರಿಕೆಯಾಗುವ ಮುನ್ಸೂಚನೆ ಇರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕವಿದೆ.
ತೊಂದರೆಗೀಡಾದ ಕುಟುಂಬಗಳಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿರುವ ಮ್ಯಾಕ್ರನ್, ಆಹುತಿಯಾದ ಪ್ರದೇಶಗಳನ್ನು ಪುನರ್ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.