
ಶೇಕಡಾ 100ರಷ್ಟು ಶುದ್ಧ ಮತ್ತು ನೈಸರ್ಗಿಕ ಎಂದು ಗ್ರಾಹಕರನ್ನು ದಾರಿ ತಪ್ಪಿಸುತ್ತಿರುವ ಆರೋಪದ ಮೇಲೆ ಡಾಬರ್ ಕಂಪನಿಯ ಉತ್ಪನ್ನಗಳ ಮಾರಾಟಕ್ಕೆ FSSAI ತಾತ್ಕಾಲಿಕ ತಡೆ ನೀಡಿದೆ.
ಜೇನುತುಪ್ಪ, ಆಪಲ್ ಸೈಡರ್ ವಿನೆಗರ್, ತೆಂಗಿನ ಎಣ್ಣೆ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ 'ಶೇ.100 ಪ್ಯೂರ್' ಎಂದು ನಮೂದಿಸುವುದು 2018ರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಈ ಸಂಬಂಧ ಡಾಬರ್ ಕಂಪನಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ 15 ದಿನಗಳ ಒಳಗಾಗಿ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.