
ಭಾರತದಲ್ಲಿ ಹೈ-ಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸಲು ತಾವು ಸಂಪೂರ್ಣ ಸಿದ್ಧರಿರುವುದಾಗಿ ಎಲಾನ್ ಮಸ್ಕ್ ಒಡೆತನದ ಸ್ಟಾರ್ಲಿಂಕ್ ಕಂಪನಿ ತಿಳಿಸಿದೆ.
ಭಾರತೀಯ ಗ್ರಾಹಕರಿಗೆ ಸುರಕ್ಷಿತವಾಗಿ ಸೇವೆ ಒದಗಿಸಲು ದೇಶದೊಳಗೇ ಅಗತ್ಯ ಗೇಟ್ವೇಗಳು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ಮಿಸಿರುವುದಾಗಿ ಕಂಪನಿ ಹೇಳಿದೆ.
ಸ್ಪರ್ಧೆಯು ದೇಶದ ಕಾನೂನು ಮತ್ತು ನೀತಿಗಳಿಗೆ ಅನುಗುಣವಾಗಿರಬೇಕು ಎಂಬ ರಿಲಯನ್ಸ್ ಇಂಡಸ್ಟ್ರೀಸ್ ಹೇಳಿಕೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.