
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ, ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆಯನ್ನು ವಹಿಸಿಕೊಳ್ಳದಂತೆ ಸೋನಿಯಾ ಗಾಂಧಿ ಅವರು ಕೈಮುಗಿದು ಅಳುತ್ತಾ ಬೇಡಿಕೊಂಡಿದ್ದರು ಎಂಬ ವಿಚಾರ ಸೋನಿಯಾ ಅವರ ಆತ್ಮಕತೆಯಲ್ಲಿ ಹೊರಬಂದಿದೆ.
ದೆಹಲಿಯ ಆಸ್ಪತ್ರೆಯಲ್ಲಿ ಪತಿಯನ್ನು ಅಪ್ಪಿಕೊಂಡಾಗ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವಂತೆ ಕೋರಿರುವುದಾಗಿ ತಿಳಿಸಿದಾಗ ತಮ್ಮ ಎದೆಗೆ ಚಾಕುವಿನಿಂದ ಇರಿದಂತಾಯಿತು ಎಂದು ಸೋನಿಯಾ ಗಾಂಧಿ ಸ್ಮರಿಸಿದ್ದಾರೆ.
ಮಕ್ಕಳಿಗಾಗಿ, ನಮಗಾಗಿ ಈ ಹುದ್ದೆ ಒಪ್ಪಿಕೊಳ್ಳಬೇಡಿ, ಅವರು ನಿನ್ನನ್ನೂ ಕೊಂದುಹಾಕುತ್ತಾರೆ ಎಂದು ಅಳುತ್ತಾ ಮನವಿ ಮಾಡಿದ್ದಾಗಿ ಅವರು ಆತ್ಮಕತೆಯಲ್ಲಿ ವಿವರಿಸಿದ್ದಾರೆ.