
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ದೇಣಿಗೆ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸುಪ್ರೀಂ ಕೋರ್ಟ್‌ಗೆ ವಸ್ತುಸ್ಥಿತಿ ವರದಿ ಸಲ್ಲಿಸಿದೆ.
ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಕಾಣಿಕೆ ಹಣವನ್ನು ಬಟ್ಟೆ ಹಾಗೂ ಶೂಗಳಲ್ಲಿ ಬಚ್ಚಿಟ್ಟು ಹೊರಸಾಗಿಸಿದ 105 ನಿದರ್ಶನಗಳು ಬೆಳಕಿಗೆ ಬಂದಿವೆ.
ಈ ಅಕ್ರಮದಲ್ಲಿ ಭಾಗಿಯಾಗಿದ್ದ 8 ಸಿಬ್ಬಂದಿಯನ್ನು ಬಂಧಿಸಿದ್ದು, 79.85 ಲಕ್ಷ ರೂಪಾಯಿಗೂ ಅಧಿಕ ನಗದನ್ನು ಜಪ್ತಿ ಮಾಡಲಾಗಿದೆ.