
ತಮಿಳುನಾಡಿನ ಕೊಯಮತ್ತೂರಿನ ಗಾಂಧಿಪುರಂನಲ್ಲಿರುವ ಮೊಬೈಲ್ ಅಂಗಡಿಗೆ ಬಂದ ಯುವತಿಯೊಬ್ಬಳು, ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಐಫೋನ್ 13 ಅನ್ನು ಕಳ್ಳತನ ಮಾಡಿದ್ದಾಳೆ.
ಅಂಗಡಿಯ ಸಿಬ್ಬಂದಿ ವಿವಿಧ ಮಾಡೆಲ್ಗಳನ್ನು ತೋರಿಸುತ್ತಿದ್ದಾಗ, ಯುವತಿ ತಂತ್ರದಿಂದ ಫೋನ್ ಅನ್ನು ತನ್ನ ಬ್ಯಾಗಿನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾಳೆ.
ಘಟನೆಯು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.