
ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಕಡ್ಡಾಯವಾಗಿರುವ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತೈಲ ವಿತರಣಾ ಕಂಪನಿಗಳು ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿವೆ.
ಈ ಹಿಂದೆ ಆಗಸ್ಟ್ 16ರವರೆಗೆ ಇದ್ದ ಗಡುವನ್ನು ವಿಸ್ತರಿಸಲಾಗಿದ್ದು, ಲಕ್ಷಾಂತರ ಗ್ರಾಹಕರಿಗೆ ತಮ್ಮ ದಾಖಲೆಗಳನ್ನು ನವೀಕರಿಸಲು ಹೆಚ್ಚಿನ ಸಮಯ ಸಿಕ್ಕಂತಾಗಿದೆ.
ಗ್ರಾಹಕರು ತಮ್ಮ ಹತ್ತಿರದ ವಿತರಕರ ಬಳಿ ಅಥವಾ ಆನ್‌ಲೈನ್ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸಬ್ಸಿಡಿ ಸೌಲಭ್ಯವನ್ನು ಮುಂದುವರಿಸಲು ಅವಕಾಶವಿದೆ.