
ದಾವಣಗೆರೆಯ ‘ಜುಡಿಯೊ’ ಮಳಿಗೆಯು ಗ್ರಾಹಕರಿಂದ ಕ್ಯಾರಿಬ್ಯಾಗ್ಗಾಗಿ ₹10 ಶುಲ್ಕ ವಸೂಲಿ ಮಾಡಿದ್ದಕ್ಕೆ ಜಿಲ್ಲಾ ಗ್ರಾಹಕರ ಆಯೋಗ ₹30,000 ದಂಡ ವಿಧಿಸಿದೆ.
ಗ್ರಾಹಕರಿಗೆ ಕ್ಯಾರಿಬ್ಯಾಗ್ಗಳನ್ನು ಉಚಿತವಾಗಿ ಒದಗಿಸುವುದು ಮಳಿಗೆಗಳ ಜವಾಬ್ದಾರಿ ಎಂದು ಆಯೋಗವು ಸ್ಪಷ್ಟಪಡಿಸಿದೆ.
ದಂಡದ ಮೊತ್ತದಲ್ಲಿ ₹10,000 ದೂರುದಾರರಿಗೆ ಪಾವತಿಸಲು ಮತ್ತು ₹20,000 ಗ್ರಾಹಕ ಕಾನೂನು ನೆರವು ಖಾತೆಗೆ ಜಮೆ ಮಾಡಲು ಆದೇಶಿಸಲಾಗಿದೆ.