
ದೆಹಲಿಯ ಕಾಳಿಂದಿ ಕುಂಜ್ ಬಳಿ ಯಮುನಾ ನದಿಯ ಮೇಲ್ಮೈನಲ್ಲಿ ದಟ್ಟವಾದ ವಿಷಕಾರಿ ನೊರೆ ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕೈಗಾರಿಕಾ ಪ್ರದೇಶಗಳಿಂದ ಸಂಸ್ಕರಿಸದ ತ್ಯಾಜ್ಯ, ಡಿಟರ್ಜೆಂಟ್ಗಳು ಮತ್ತು ಒಳಚರಂಡಿ ನೀರನ್ನು ನದಿಗೆ ಹರಿಸುತ್ತಿರುವುದು ನೊರೆ ಉಂಟಾಗಲು ಮುಖ್ಯ ಕಾರಣವಾಗಿದೆ.
ಉತ್ತರ ಭಾರತದ ಪ್ರಮುಖ ಹಬ್ಬ 'ಛತ್ ಪೂಜೆ' ಸಮೀಪಿಸುತ್ತಿರುವಾಗ ನದಿಯ ವಿಷಕಾರಿ ಸ್ಥಿತಿಯು ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುವ ಭೀತಿ ಎದುರಾಗಿದೆ.