
ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಖಮ್ಮಂ-ಹೈದರಾಬಾದ್ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವೋಲ್ವೋ ಕಾರು ಡಿವೈಡರ್ಗೆ ಡಿಕ್ಕಿಹೊಡೆದು ಹೊತ್ತಿಕೊಂಡ ಬೆಂಕಿಯಲ್ಲಿ ಖ್ಯಾತ ನ್ಯೂರೋಸರ್ಜನ್ ಡಾ. ಕಸಕುರ್ತಿ ಜಗದೀಶ್ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.
ಮಮತಾ ಜನರಲ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕರಾದ ಅವರು ನೈಟ್ ಡ್ಯೂಟಿ ಮುಗಿಸಿ ಹೈದರಾಬಾದ್ನಲ್ಲಿರುವ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಭಾನುವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ.
ಮುಂಜಾನೆಯ ಪ್ರಯಾಣದಲ್ಲಿ ನಿದ್ರೆ ಮಂಪರು ಆವರಿಸಿ ವಾಹನ ನಿಯಂತ್ರಣ ತಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳದಿಂದ ಡಿಎನ್ಎ ದೃಢೀಕರಣಕ್ಕಾಗಿ ಮಾದರಿ ಸಂಗ್ರಹಿಸಿದ್ದಾರೆ.