
ಟಾಕ್ಸಿಕ್ ಚಿತ್ರದ ಆಕ್ಷನ್ ದೃಶ್ಯಗಳನ್ನು ನಿರ್ದೇಶಿಸಿರುವ ಹಾಲಿವುಡ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ, ನಟ ಯಶ್ ಅವರ ನಟನೆ ಮತ್ತು ಸಮರ್ಪಣಾ ಮನೋಭಾವವನ್ನು ಬಹುವಾಗಿ ಶ್ಲಾಘಿಸಿದ್ದಾರೆ.
ಸರ್ಕಸ್ ಕ್ಯಾಂಪ್‌ನಲ್ಲಿ ನಡೆದ ಫೈಟ್ ದೃಶ್ಯದಲ್ಲಿ ವಿಶೇಷ ಆಯುಧಗಳ ಬದಲಿಗೆ ಸ್ಥಳೀಯ ವಸ್ತುಗಳನ್ನು ಬಳಸಿದ್ದು ಸವಾಲಿನ ಕೆಲಸವಾಗಿತ್ತು ಎಂದು ಪೆರ್ರಿ ವಿವರಿಸಿದ್ದಾರೆ.
ನಿರ್ದೇಶಕಿ ಗೀತೂ ಮೋಹನ್ ದಾಸ್ ಮತ್ತು ಯಶ್ ಅವರ ತಂಡದ ಕೆಲಸವನ್ನು ಕೊಂಡಾಡಿರುವ ಪೆರ್ರಿ, ಯಶ್ ಅವರಲ್ಲಿರುವ ಸ್ಟ್ರೆಂತ್ ಮತ್ತು ಹೊಸ ಐಡಿಯಾಗಳನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.