
ರಾಯಪುರದಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 9 ವಿಕೆಟ್ಗಳಿಂದ ಸೋಲಿಸಿದ ಭಾರತ ಮಹಿಳಾ ತಂಡವು ಸರಣಿಯನ್ನು 2–0ಯಿಂದ ವಶಪಡಿಸಿಕೊಂಡಿತು.
ಕರ್ನಾಟಕದ ನಿಕಿ ಪ್ರಸಾದ್ ಅವರ ಕೇವಲ 7 ರನ್ ನೀಡಿ 2 ವಿಕೆಟ್ ಪಡೆದ ಅಮೋಘ ಬೌಲಿಂಗ್ ಪ್ರದರ್ಶನದಿಂದ ಜಿಂಬಾಬ್ವೆ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 102 ರನ್ ಗಳಿಸಲಷ್ಟೇ ಶಕ್ತವಾಯಿತು.
ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಶಫಾಲಿ ವರ್ಮಾ ಅವರ 55 ಹಾಗೂ ಸ್ಮೃತಿ ಮಂದಾನ ಅವರ ಔಟಾಗದ 47 ರನ್ಗಳ ಬಲದಿಂದ 8.5 ಓವರ್ಗಳಲ್ಲಿ 1 ವಿಕೆಟ್ಗೆ 104 ರನ್ ಗಳಿಸಿ ಜಯಗಳಿಸಿತು.