
ಬೆಂಗಳೂರಿನ ಮಿನರ್ವ ವೃತ್ತದ ಕೃಪಾ ಹೆಲ್ತ್ ಕೇರ್ ಮಾಲೀಕ ಹಾಗೂ ನಕಲಿ ಔಷಧ ಮರು ಪ್ಯಾಕಿಂಗ್ ಮತ್ತು ಮಾರಾಟ ಪ್ರಕರಣದ ಪ್ರಮುಖ ಆರೋಪಿ ವೀರೇಶ್ ಕುಮಾರ್ ಜೈನ್ ಅವರನ್ನು ಎಸ್‌ಐಟಿ ವಶಕ್ಕೆ ಪಡೆದಿದೆ.
ಆರೋಪಿಯು ನಕಲಿ ಔಷಧಗಳನ್ನು ತಯಾರಿಸಿ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ವಾರ್ಷಿಕವಾಗಿ ₹15 ಕೋಟಿ ವಹಿವಾಟು ನಡೆಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಸೆಪ್ಟೆಂಬರ್ 22ರವರೆಗೆ 7 ದಿನಗಳ ಕಾಲ ವಿಶೇಷ ತನಿಖಾ ತಂಡದ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.