
ಚೀನಾದಲ್ಲಿ ನಡೆದ ಜೂನಿಯರ್ ಮಹಿಳೆಯರ ಏಷ್ಯಾಕಪ್ ಹಾಕಿ ಟೂರ್ನಿಯ ಸೆಮಿಫೈನಲ್ನಲ್ಲಿ ಭಾರತ ತಂಡವು 5–1 ಗೋಲುಗಳಿಂದ ದಕ್ಷಿಣ ಕೊರಿಯಾವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.
ಭಾರತದ ಪರ ಡ್ರ್ಯಾಗ್ ಫ್ಲಿಕರ್ ಸುಪ್ರಿಯಾ ಅವರು ಹ್ಯಾಟ್ರಿಕ್ ಗೋಲುಗಳ (17ನೇ, 33ನೇ ಹಾಗೂ 56ನೇ ನಿಮಿಷ) ಮೂಲಕ ಭರ್ಜರಿ ಪ್ರದರ್ಶನ ನೀಡಿದರು.
ಭಾರತೀಯ ಜೂನಿಯರ್ ವನಿತೆಯರ ತಂಡವು ಭಾನುವಾರ ನಡೆಯಲಿರುವ ರೋಚಕ ಫೈನಲ್ನಲ್ಲಿ ಆತಿಥೇಯ ಚೀನಾ ತಂಡವನ್ನು ಎದುರಿಸಲಿದೆ.