
ಬೆಂಗಳೂರಿನ ಯೂಟ್ಯೂಬರ್ ನಿಹಾರಿಕಾ ಎನ್.ಎಂ. ಅವರು ತಮ್ಮ ಸತತ ಪ್ರಯತ್ನದಿಂದ ಬಾಲಿವುಡ್ ನಟ ರಾಘವ್ ಜುರೆಲ್ ಜೊತೆಗೆ 'ಭಾಯಿ ಥೆರ ಸ್ಟಾರ್ ಹೇ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಈ ಹಿಂದೆ ತಮಿಳಿನ 'ಪೆರುಸು' ಮತ್ತು 2025ರಲ್ಲಿ ತೆಲುಗಿನ ಹಿಟ್ ಸಿನಿಮಾ 'ಮಿತ್ರ ಮಂಡಳಿ'ಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ನಿಹಾರಿಕಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಜಾರ್ಡ್ ಇಂಡಿಯನ್ ಯೂಟ್ಯೂಬ್ ಚಾನೆಲ್ ಮೂಲಕ ಜನಪ್ರಿಯರಾಗಿದ್ದ ನಿಹಾರಿಕಾ, ಇದೀಗ 'ಇದಯುಂ ಮುರಲಿ' ಎಂಬ ತಮಿಳು ಸಿನಿಮಾದಲ್ಲೂ ನಟಿಸಲು ಸಜ್ಜಾಗಿದ್ದಾರೆ.