
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026-2027ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳು ಫೆಬ್ರವರಿ 27ರಿಂದ ಮಾರ್ಚ್ 18ರವರೆಗೆ ಬೆಳಗ್ಗೆ 10:00ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಜರುಗಲಿವೆ.
ಮೊದಲ ದಿನ ಕನ್ನಡ ಮತ್ತು ಅರೇಬಿಕ್ ಭಾಷಾ ಪರೀಕ್ಷೆಗಳು ನಡೆಯಲಿದ್ದು, ಮಾರ್ಚ್ 1ರಂದು ಇಂಗ್ಲಿಷ್ ಪರೀಕ್ಷೆ ನಿಗದಿಯಾಗಿದೆ.