
ನೈಸ್ ಯೋಜನೆ ಮತ್ತು ಬಿಡದಿ ಟೌನ್ಶಿಪ್ ಅಕ್ರಮದ ಕುರಿತು ಫ್ರೀಡಂ ಪಾರ್ಕ್ನಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
1995ರ ಫೆಬ್ರವರಿ 2ರಂದು ಎಂಒಯು ಆಗಿದ್ದ ಯೋಜನೆಯನ್ನು ಮಧ್ಯವರ್ತಿಗಳ ಮೂಲಕ ದಾರಿ ತಪ್ಪಿಸಲಾಗಿದೆ ಎಂದು ಆರೋಪಿಸಿರುವ ಕುಮಾರಸ್ವಾಮಿ, 1.75 ಲಕ್ಷ ಎಕರೆ ಭೂಮಿ ಸ್ವಾಧೀನದ ಬಗ್ಗೆ ಪ್ರಶ್ನಿಸಿದ್ದಾರೆ.
ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ನೈಸ್ ಅಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಪಾತ್ರದ ಬಗ್ಗೆ ದಾಖಲೆಗಳಿದ್ದು, ಸರ್ಕಾರ ಏಕೆ ಮೌನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.