
ವಿಜಯದಶಮಿಯ ಸಂದರ್ಭದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರದ ಗೌರವ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಹಾಳುಮಾಡುವ ಶಕ್ತಿಗಳ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ನಿಲ್ಲುವಂತೆ ಮಂಗಳವಾರ ಕರೆ ನೀಡಿದ್ದಾರೆ.
ದೆಹಲಿಯಲ್ಲಿ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಸಮಾಜವನ್ನು ವಿಭಜಿಸುವ ಮತ್ತು ದೇಶದ ಗೌರವಕ್ಕೆ ಹಾನಿ ಮಾಡುವ ಶಕ್ತಿಗಳನ್ನು ಗುರುತಿಸಿ ಸೋಲಿಸುವಂತೆ ಪ್ರಸ್ತಾಪಿಸಿದರು.
ರಾಜ್ಯದ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಶ್ರೀರಾಮನ ಉತ್ತಮ ಆಡಳಿತದ ಆದರ್ಶಗಳನ್ನು ಮತ್ತು ರಾಮರಾಜ್ಯದ ಕಲ್ಪನೆಯನ್ನು ಇಂದಿಗೂ ಮಾನದಂಡವಾಗಿ ಅನುಸರಿಸಬೇಕಾಗಿದೆ ಎಂದು ಮೋದಿ ಹೇಳಿದರು.