
ವಿಮಲ್ ರಾಜ್ ಎನ್. ನಿರ್ದೇಶನದ ‘ಎ ಡೇಟ್’ ಚಿತ್ರದ ಪ್ರಚಾರಕ್ಕಾಗಿ ‘ಬ್ಯಾಡ್ ಗೈ ಆ್ಯಂಥಮ್’ ಎಂಬ ರ್ಯಾಪ್ ಶೈಲಿಯ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗುವ ಉತ್ತರ ಭಾರತದ ಯುವತಿ ಮತ್ತು ದಕ್ಷಿಣ ಭಾರತದ ಯುವಕನ ಸುತ್ತ ಸಾಗುವ ಈ ಚಿತ್ರದಲ್ಲಿ ಸುಜನಿತ್ ಶೆಟ್ಟಿ ಮತ್ತು ಅಶ್ವಿನಿ ಶೆಣೈ ಮುಖ್ಯ ಪಾತ್ರಗಳಲ್ಲಿದ್ದಾರೆ.
ಇಂದಿನ ಡೇಟಿಂಗ್ ಸಂಸ್ಕೃತಿ ಮತ್ತು ಮಾನವೀಯ ಸಂಬಂಧಗಳ ಕುರಿತಾದ ಈ ರೊಮ್ಯಾಂಟಿಕ್ ಡ್ರಾಮಾ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.