
ಜರ್ಮನಿಯ ಹೆಲ್ಮ್ಹೋಲ್ಟ್ಜ್-ಸೆಂಟ್ರಮ್ ಡ್ರೆಸ್ಡನ್-ರಾಸೆಂಡಾರ್ಫ್ ಮತ್ತು ರೊಸ್ಟಾಕ್ ವಿಶ್ವವಿದ್ಯಾಲಯದ ಸಂಶೋಧಕರು ಪ್ಲಾಸ್ಟಿಕ್ ಮತ್ತು ಪ್ರಬಲ ಲೇಸರ್ ಕಿರಣಗಳನ್ನು ಬಳಸಿ ಅತಿ ಸೂಕ್ಷ್ಮವಾದ ನ್ಯಾನೋಡೈಮಂಡ್ಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೀರಿನ ಬಾಟಲಿ ತಯಾರಿಕೆಯಲ್ಲಿ ಬಳಸುವ PET ಪ್ಲಾಸ್ಟಿಕ್ ಹಾಳೆಯ ಮೇಲೆ ಪ್ರಬಲ ಲೇಸರ್ ಕಿರಣ ಹಾಯಿಸಿದಾಗ ಉಂಟಾದ 100 ಗಿಗಾಪಾಸ್ಕಲ್ ಒತ್ತಡದಿಂದ ಕಾರ್ಬನ್ ಪರಮಾಣುಗಳು ಮರುಜೋಡಣೆಗೊಂಡು ವಜ್ರದ ರಚನೆಗಳನ್ನು ರೂಪಿಸಿವೆ.
ಈ ಪ್ರಯೋಗದಲ್ಲಿ ಪ್ರತಿ ಲೇಸರ್ ಶಾಟ್ಗೆ ಸರಾಸರಿ 3 ನ್ಯಾನೋಮೀಟರ್ ಗಾತ್ರದ ಸುಮಾರು 10 ಟ್ರಿಲಿಯನ್ ನ್ಯಾನೋಡೈಮಂಡ್ಗಳು ರೂಪುಗೊಂಡಿದ್ದು, ಇವು ನೆಪ್ಚೂನ್ ಮತ್ತು ಯುರೇನಸ್ನಂತಹ ಗ್ರಹಗಳ ಒಳಭಾಗದ ಅಧ್ಯಯನಕ್ಕೆ ನೆರವಾಗಲಿದೆ.