
ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಚಿತ್ರದ ಶೂಟಿಂಗ್ ವೇಳೆ ನಟ ಜೂನಿಯರ್ ಎನ್ಟಿಆರ್ ಅವರ ಭುಜಕ್ಕೆ ಗಾಯವಾಗಿದ್ದು, ವೈದ್ಯರು 6ರಿಂದ 8 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ.
ವೈದ್ಯರ ತಂಡದ ತಪಾಸಣೆಯ ನಂತರ ನಟನ ಆರೋಗ್ಯ ಸ್ಥಿರವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.
ಚಿತ್ರ ತೆರೆಕಾಣಲು ಇನ್ನೂ 10 ತಿಂಗಳ ಕಾಲಾವಕಾಶ ಇರುವುದರಿಂದ, ಈ ಗಾಯದಿಂದಾಗಿ ಸಿನಿಮಾದ ಕೆಲಸಗಳಿಗೆ ದೊಡ್ಡ ಮಟ್ಟದ ಅಡಚಣೆಯಾಗುವುದಿಲ್ಲ ಎಂದು ಹೇಳಲಾಗಿದೆ.