
ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ರಕ್ಷಣಾ ಸಚಿವಾಲಯ ಹಾಗೂ ರಾಸ್ ತನುರಾ ತೈಲ ಸಂಸ್ಕರಣಾಗಾರದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಅಕ್ಟೋಬರ್ 27ರಂದು ಘೋಷಿಸಿದ್ದಾರೆ.
ರಿಯಾದ್‌ನಲ್ಲಿ ಭಾರಿ ಸ್ಫೋಟದ ಸದ್ದುಗಳು ಕೇಳಿಬಂದಿದ್ದು, ಸೌದಿ ರಕ್ಷಣಾ ಪಡೆಗಳು ಉಡಾಯಿಸಲಾದ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿ ಧ್ವಂಸಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸೌದಿ ರಾಜಧಾನಿಯ ರಕ್ಷಣಾ ಸಚಿವಾಲಯದ ಕಟ್ಟಡವನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾಯಿಸಲಾಗಿದ್ದು, ಅದು ನೇರವಾಗಿ ಟಾರ್ಗೆಟ್‌ಗೆ ಅಪ್ಪಳಿಸಿದೆ ಎಂದು ಹೌತಿ ಮಿಲಿಟರಿ ವಕ್ತಾರ ಯಹ್ಯಾ ಸಾರಿ ಹೇಳಿದ್ದಾರೆ.