
ಗುಜರಾತ್‌ನ ಭಾವ್‌ನಗರದಲ್ಲಿ ಬುಧವಾರ ವಿಷಯುಕ್ತ ಮದ್ಯ ಸೇವಿಸಿ ನಾಲ್ವರು ಮೃತಪಟ್ಟು, ಇತರೆ 18 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಧ್ಯಪ್ರದೇಶದ ಉಜ್ಜೈನಿಯಿಂದ 230 ಬಾಟಲ್‌ಗಳಷ್ಟು ವಿಷಯುಕ್ತ ಮದ್ಯವನ್ನು ಅಕ್ರಮವಾಗಿ ತರಲಾಗಿದ್ದು, ಶೇ 90ರಷ್ಟನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐವರು ಅಕ್ರಮ ಮದ್ಯ ತಯಾರಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಉಪಮುಖ್ಯಮಂತ್ರಿ ಹರ್ಷ್ ಸಾಂಘ್ವಿ ಘಟನೆಯ ತನಿಖೆಗೆ ಸೂಚಿಸಿದ್ದಾರೆ.