
ಲೂಸೇನ್ ಡೈಮಂಡ್ ಲೀಗ್ನಲ್ಲಿ ಭಾರತದ ನೀರಜ್ ಚೋಪ್ರಾ 88.05 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಶ್ರೀಲಂಕಾದ ರುಮೇಶ್ ತರಂಗ ಪತಿರಾಗೆ 88.14 ಮೀಟರ್ ದೂರಕ್ಕೆ ಭರ್ಜಿ ಎಸೆದು ಪ್ರಥಮ ಸ್ಥಾನ ಪಡೆದಿದ್ದು, ನೀರಜ್ ಅವರಿಗಿಂತ ಕೇವಲ 9 ಸೆಂಟಿಮೀಟರ್ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬೆನ್ನು ನೋವಿನ ಗಾಯದಿಂದ ಚೇತರಿಸಿಕೊಂಡ ನಂತರ ನೀರಜ್ ಈ ಸೀಸನ್ನಲ್ಲಿ ಮೊದಲ ಬಾರಿಗೆ 88 ಮೀಟರ್ ಗಡಿಯನ್ನು ದಾಟಿದ್ದು, ಪತಿರಾಗೆ ವಿರುದ್ಧ ಸತತ ಮೂರನೇ ಸೋಲು ಅನುಭವಿಸಿದ್ದಾರೆ.