
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜುಲೈ 25ರ ರಾತ್ರಿ 10:45ರ ಸುಮಾರಿಗೆ ಹನುಮಂತ ಅಥಣಿ ಅವರಿಗೆ ಸೇರಿದ ಮಹೀಂದ್ರಾ XUV300 ಕಾರು ಸ್ಫೋಟಗೊಂಡಿದೆ.
ವೈನ್ ಸ್ಟೋರ್ ಎದುರು ನಿಲ್ಲಿಸಿದ್ದ ಕಾರು ಸ್ಫೋಟಗೊಂಡಿದ್ದು, ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಮತ್ತು ಎಸ್ಒಸಿಒ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಘಟನೆಯಲ್ಲಿ ಬಾಂಬ್ ಸ್ಫೋಟದ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.