
ಮೊಲ್ಡೊವಾದಿಂದ ನಾರ್ವೆಗೆ ತೆರಳುತ್ತಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ವಿಮಾನದ ಹಾರಾಟದ ವೇಳೆ ರಷ್ಯಾದ ‘ಗೆರಾನ್’ ಮಾದರಿಯ ಡ್ರೋನ್ ಪತನಗೊಂಡು ಸ್ಫೋಟಗೊಂಡಿದೆ ಎಂದು ನಾರ್ವೆ ಪ್ರಧಾನಿ ತಿಳಿಸಿದ್ದಾರೆ.
ಚಿಸಿನೌ ವಿಮಾನ ನಿಲ್ದಾಣದಿಂದ 160 ಕಿ.ಮೀ. ದೂರದಲ್ಲಿ ಡ್ರೋನ್ ಅಪ್ಪಳಿಸಿದ ಪರಿಣಾಮ, ಭದ್ರತಾ ಕಾರಣಗಳಿಂದ ಝೆಲೆನ್ಸ್ಕಿ ಅವರ ವಿಮಾನ ಸೇರಿದಂತೆ 7 ವಿಮಾನಗಳ ಹಾರಾಟ ವಿಳಂಬವಾಯಿತು.
ಘಟನೆಯ ನಂತರ ಝೆಲೆನ್ಸ್ಕಿ ಸುರಕ್ಷಿತವಾಗಿ ಓಸ್ಲೋ ತಲುಪಿದ್ದು, ಉಕ್ರೇನ್ ಮೂಲಗಳು ಈ ಘಟನೆಯನ್ನು ಭದ್ರತಾ ಕಾರಣದಿಂದಾದ ವಿಳಂಬ ಎಂದು ಸ್ಪಷ್ಟಪಡಿಸಿವೆ.