
ಕೆಲಸದ ಪ್ರವಾಸದ ವೇಳೆ ಹೋಟೆಲ್ ಸೌನಾ ಕೊಠಡಿಯಲ್ಲಿ ರಾತ್ರಿ ಕಳೆದ ಕಾರಣಕ್ಕೆ ವಜಾಗೊಂಡಿದ್ದ ಟೆಕ್ ಕಂಪನಿಯ ಮಾಜಿ ಅಧಿಕಾರಿ ಶಾನನ್ ಬರ್ನ್ಸ್ಗೆ ಕಾನೂನು ಗೆಲುವು ಸಿಕ್ಕಿದೆ.
ಬ್ರಿಟನ್ ಉದ್ಯೋಗ ನ್ಯಾಯಮಂಡಳಿಯು ಅಂಗವೈಕಲ್ಯ ತಾರತಮ್ಯ ಪ್ರಕರಣದಲ್ಲಿ ಅವರ ಅರ್ಜಿಯನ್ನು ಮುಂದುವರಿಸಲು ಅನುಮತಿ ನೀಡಿದ್ದು, 9,637 ಕೋಟಿ ರೂ. ಪರಿಹಾರ ಕೋರಲು ಅವಕಾಶ ನೀಡಿದೆ.
Gitpod ಕಂಪನಿಯಲ್ಲಿ ಉದ್ಯೋಗ ಕಳೆದುಕೊಳ್ಳದೇ ಇದ್ದರೆ ಸಿಗಬೇಕಿದ್ದ ಸಂಬಳ, ಬೋನಸ್ ಹಾಗೂ ಶೇ.0.85ರಷ್ಟು ಷೇರುಗಳ ಆದಾಯದ ಆಧಾರದ ಮೇಲೆ ಅವರು ಈ ಪರಿಹಾರ ಕೋರಿದ್ದಾರೆ.