
ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯಗಳಲ್ಲಿ ಜಯ ಸಾಧಿಸಿದ ಪೂರ್ವ ಮತ್ತು ದಕ್ಷಿಣ ವಲಯ ತಂಡಗಳು ಫೈನಲ್ ಪ್ರವೇಶಿಸಿದ್ದು, ಸೆಪ್ಟೆಂಬರ್ 6ರಂದು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಮೊದಲ ಸೆಮಿಫೈನಲ್ನಲ್ಲಿ ಕೇಂದ್ರ ವಲಯವನ್ನು ಮಣಿಸಿದ ಪೂರ್ವ ವಲಯ 13 ವರ್ಷಗಳ ಬಳಿಕ ಫೈನಲ್ ತಲುಪಿದ್ದರೆ, ದಕ್ಷಿಣ ವಲಯ ತಂಡ ಉತ್ತರ ವಲಯವನ್ನು 7 ವಿಕೆಟ್ಗಳಿಂದ ಸೋಲಿಸಿದೆ.
ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ನಾಯಕತ್ವದ ಪೂರ್ವ ವಲಯ ತಂಡವು ತಿಲಕ್ ವರ್ಮಾ ನೇತೃತ್ವದ ದಕ್ಷಿಣ ವಲಯ ತಂಡವನ್ನು ಎದುರಿಸಲಿದೆ.