
ಕರ್ನಾಟಕದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಬೆಳವಣಿಗೆಗೆ ನ್ಯಾಷನಲ್ ಎಂಟ್ರಪ್ರೆನ್ಯೂರ್‌ಶಿಪ್ ನೆಟ್‌ವರ್ಕ್ ಮತ್ತು ಎಫ್‌ಕೆಸಿಸಿಐ ಮಹತ್ವದ ಒಪ್ಪಂದ ಮಾಡಿಕೊಂಡಿವೆ.
ವಾರ್ಷಿಕ 25 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುವ ರಾಜ್ಯದ 1,000ಕ್ಕೂ ಹೆಚ್ಚು ಉದ್ಯಮಗಳಿಗೆ ವಾಧ್ವಾನಿ ಆಕ್ಸಿಲರೇಟ್ ಕಾರ್ಯಕ್ರಮದ ಮೂಲಕ ಬೆಂಬಲ ಸಿಗಲಿದೆ.
ಆಯ್ಕೆಯಾದ ಉದ್ಯಮಗಳಿಗೆ ಉಚಿತವಾದ 90 ದಿನಗಳ ಗ್ರೋತ್ ಸ್ಪ್ರಿಂಟ್ ಕಾರ್ಯಕ್ರಮದ ಮೂಲಕ ಪ್ರಾಯೋಗಿಕ ಬೆಂಬಲ ನೀಡಲಾಗುತ್ತದೆ.