
ಬೆಂಗಳೂರಿನ ಪಂಚತಾರಾ ಹೋಟೆಲ್ಗಳಲ್ಲಿ ಆಹಾರ ಸುರಕ್ಷತಾ ಇಲಾಖೆ ನಡೆಸಿದ ತಪಾಸಣೆಯಲ್ಲಿ 26 ಹೋಟೆಲ್ಗಳಲ್ಲಿ ಅವಧಿ ಮೀರಿದ ಆಹಾರ ಮತ್ತು ಕಳಪೆ ಗುಣಮಟ್ಟದ ಮಾಂಸ ಪತ್ತೆಯಾಗಿದೆ.
ದಿ ಲಲಿತ್ ಅಶೋಕ್ನಲ್ಲಿ 76 ಕೆ.ಜಿ ಮಾಂಸ, ತಾಜ್ ಯಶವಂತಪುರದಲ್ಲಿ 72 ಕೆ.ಜಿ ಮಾಂಸ ಮತ್ತು ಹೋಟೆಲ್ ಅತ್ರಿಯಾದಲ್ಲಿ 105 ಕೆ.ಜಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಆಹಾರದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ನಿಯಮ ಉಲ್ಲಂಘಿಸಿದ ಹೋಟೆಲ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.