
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಮನೆಯಿಂದ ಹೊರನಡೆದ ಮೂವರ ಜಾಗವನ್ನು ತುಂಬಲು ಗಾನವಿ, ಪ್ರಶಾಂತ್ ಹಾಗೂ ಸೋನಿಕಾ ಗೌಡ ಅವರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸುತ್ತಿದ್ದಾರೆ.
ಘಾಟಿ ಹುಡುಗಿ ಹಾಗೂ ಕಂಟೆಂಟ್ ಕ್ರಿಯೇಟರ್ ಗಾನವಿ, ಕಾಮಿಡಿಯನ್ ಪ್ರಶಾಂತ್ ಮತ್ತು ಉದ್ಯಮಿ ಹಾಗೂ ಮಾಜಿ ನಟಿ ಸೋನಿಕಾ ಅವರನ್ನು ಭಾನುವಾರದ ಎಪಿಸೋಡಿನಲ್ಲಿ ಸುದೀಪ್ ಪರಿಚಯಿಸಿದರು.
ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ಈ ಮೂವರು ಸ್ಪರ್ಧಿಗಳು ಸೋಮವಾರದ ಎಪಿಸೋಡಿನಲ್ಲಿ ಬಹುಷಃ ಮನೆಯ ಒಳಗೆ ಪ್ರವೇಶಿಸುವ ಸಾಧ್ಯತೆಯಿದೆ.