
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಗ್ರಾಹಕರು ಆಗಸ್ಟ್ 15ರೊಳಗೆ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ತೈಲ ಕಂಪನಿಗಳು ಸೂಚನೆ ನೀಡಿವೆ.
ಇ-ಕೆವೈಸಿ ಮಾಡಿಸದಿದ್ದರೆ ಗೃಹ ಬಳಕೆಯ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ ಮತ್ತು ಗ್ರಾಹಕರು ವಾಣಿಜ್ಯ ದರದ ಸಿಲಿಂಡರ್ ಅನ್ನು ₹2108 ನೀಡಿ ಖರೀದಿಸಬೇಕಾಗುತ್ತದೆ.
ಗ್ರಾಹಕರು ತಮ್ಮ ಗ್ಯಾಸ್ ಕಂಪನಿಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಬಳಸಿ ಮುಖ ದೃಢೀಕರಣದ ಮೂಲಕ ಮನೆಯಿಂದಲೇ ಕೆಲವೇ ನಿಮಿಷಗಳಲ್ಲಿ ಇ-ಕೆವೈಸಿ ಪೂರ್ಣಗೊಳಿಸಬಹುದು.