
ಅಸುರಕ್ಷಿತ ಟ್ಯಾಟೂಗಳಿಂದ ಎಚ್‌ಐವಿ, ಹೆಪಟೈಟಿಸ್ ಬಿ, ಸಿ ಮತ್ತು ಚರ್ಮದ ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಹರಡುತ್ತಿರುವುದರಿಂದ ಹೊಸ ಕಾನೂನು ಜಾರಿಗೆ ಆರೋಗ್ಯ ಇಲಾಖೆ ಮುಂದಾಗಿದೆ.
ಔಷಧ ನಿಯಂತ್ರಣ ಇಲಾಖೆಯ ಪರೀಕ್ಷೆಯಲ್ಲಿ ಟ್ಯಾಟೂ ಇಂಕ್‌ಗಳಲ್ಲಿ ಸೀಸ ಮತ್ತು ಕ್ರೋಮಿಯಂನಂತಹ ಅಪಾಯಕಾರಿ ಭಾರಲೋಹಗಳು ಪತ್ತೆಯಾಗಿವೆ ಎಂದು ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.
ಟ್ಯಾಟೂ ತಯಾರಕರು ಮತ್ತು ಪಾರ್ಲರ್‌ಗಳಿಗೆ ಕಟ್ಟುನಿಟ್ಟಾದ ಮಾನದಂಡಗಳನ್ನು ರೂಪಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.