
ನೋಯ್ಡಾದ ಸೆಕ್ಟರ್ 82ರಲ್ಲಿರುವ ಕೇಂದ್ರೀಯ ವಿಹಾರ್-II ಸೊಸೈಟಿಯ ಫ್ಲಾಟ್‌ನಲ್ಲಿ ಲೋಕಸಭಾ ಸಚಿವಾಲಯದ ನಿರ್ದೇಶಕ ಗೌರವ್ ಗೌತಮ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ಪೊಲೀಸರಿಗೆ 15 ಪುಟಗಳ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಗೌರವ್ ಅವರು 70 ಲಕ್ಷ ರೂಪಾಯಿಗೂ ಅಧಿಕ ಸಾಲದ ಸುಳಿಯಲ್ಲಿ ಸಿಲುಕಿದ್ದಾಗಿ ಬರೆದುಕೊಂಡಿದ್ದಾರೆ.
ಪತ್ನಿ ಭಾನುವಾರ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದ್ದು, ಕುಟುಂಬಸ್ಥರು ಯಾರ ವಿರುದ್ಧವೂ ದೂರು ನೀಡಿಲ್ಲವಾದರೂ ಪೊಲೀಸರು ಸಾಲದ ಮೂಲಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.