
ತಮಿಳುನಾಡು ಸರ್ಕಾರವು ಮಹಿಳಾ ಸರ್ಕಾರಿ ನೌಕರರಿಗೆ ತಮ್ಮ ಮೂರನೇ ಮಗುವಿನ ಜನನದ ಸಂದರ್ಭದಲ್ಲೂ ಪೂರ್ಣ 1 ವರ್ಷದ ವೇತನ ಸಹಿತ ಹೆರಿಗೆ ರಜೆ ನೀಡಲು ನಿರ್ಧರಿಸಿದೆ.
ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ಡಿ. ಶರತ್ಕುಮಾರ್ ಅವರು ಈ ಐತಿಹಾಸಿಕ ತೀರ್ಮಾನವನ್ನು ವಿಧಾನಸಭೆಯಲ್ಲಿ ಪ್ರಕಟಿಸಿದ್ದು, ಈ ಹಿಂದೆ ಮೂರನೇ ಮಗುವಿಗೆ ಕೇವಲ 12 ವಾರಗಳ ರಜೆ ಇತ್ತು.
ರಾಜ್ಯದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಕಚೇರಿಗಳಲ್ಲಿ ಕಾರ್ಯಕ್ರಮದ ಆರಂಭದಲ್ಲಿ 'ತಮಿಳ್ ತಾಯ್ ವಳ್ತು' ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.