
ಎಸ್ಆರ್ಸಿಸಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶವಿರೋಧಿ ಅಜೆಂಡಾಗಳಿಗೆ ವೇದಿಕೆ ಕಲ್ಪಿಸುತ್ತಿರುವ 'ದಿಮಾಗಿ ನಕ್ಸಲ್'ಗಳ ವಿರುದ್ಧ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ತಾವು ನೀಡಿದ ಹೋಮಿಯೋಪತಿ ಮಾತ್ರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದವರನ್ನು ಉದ್ದೇಶಿಸಿ, ಅಂತಹ ವ್ಯಕ್ತಿಗಳನ್ನು ದೇಶ ಗಮನಿಸುತ್ತಿದೆ ಎಂದು ಮೋದಿ ಎಚ್ಚರಿಸಿದ್ದಾರೆ.
ದಿಮಾಗಿ ನಕ್ಸಲರು ಎಂದು ತಾವು ಕರೆದವರು ತಮ್ಮ ಹೇಳಿಕೆಯ ನಂತರ ಒಬ್ಬರಾದ ಮೇಲೊಬ್ಬರು ಹೊರಬಂದಿದ್ದಾರೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ವ್ಯಂಗ್ಯವಾಡಿದ್ದಾರೆ.