
ಶೇ. 20 ಎಥೆನಾಲ್ ಮಿಶ್ರಿತ ಇಂಧನದ ಬದಲು 100% ಶುದ್ಧ ಪೆಟ್ರೋಲ್ ಆಯ್ಕೆ ನೀಡಬೇಕೆಂದು ಆಗ್ರಹಿಸಿ 'E20 ಜನತಾ ಪಕ್ಷ' ಆಗಸ್ಟ್ 4 ರಂದು ಸಂಸತ್ತಿನ ಕಡೆಗೆ ಬೃಹತ್ ಮೆರವಣಿಗೆ ನಡೆಸಲಿದೆ.
ದೆಹಲಿಯಲ್ಲಿ ಸಾಮಾನ್ಯ E20 ಪೆಟ್ರೋಲ್ ಲೀಟರ್‌ಗೆ 102.12 ರೂ. ಇದ್ದರೆ, ಎಥೆನಾಲ್-ಮುಕ್ತ 100-ಆಕ್ಟೇನ್ ಪ್ರೀಮಿಯಂ ಪೆಟ್ರೋಲ್ ಲೀಟರ್‌ಗೆ 169 ರೂ.ನಷ್ಟಿದೆ ಎಂದು ವರದಿಯಾಗಿದೆ.
ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ ಮತ್ತು ಎಂಜಿನ್ ವೈಫಲ್ಯ ಉಂಟಾಗುತ್ತಿದೆ ಎಂದು ಆರೋಪಿಸಿರುವ ಈ ಸಂಘಟನೆಯು ಸಚಿವ ನಿತಿನ್ ಗಡ್ಕರಿ ಅವರ ರಾಜೀನಾಮೆಗೆ ಒತ್ತಾಯಿಸಿದೆ.