Health & Environment
ಮೈಸೂರಿನಲ್ಲಿ ಭಾರಿ ಮಳೆ: ಯುವ ದಸರಾ ಸ್ಥಗಿತ

ಮೈಸೂರಿನಲ್ಲಿ ಭಾರಿ ಮಳೆ: ಯುವ ದಸರಾ ಸ್ಥಗಿತ

tv9kannada1h
THE BRIEF
1

ಮೈಸೂರಿನಲ್ಲಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯಿಂದಾಗಿ ಯುವ ದಸರಾ ಕಾರ್ಯಕ್ರಮಕ್ಕೆ ಅಡ್ಡಿಯುಂಟಾಗಿದ್ದು, ಗಾಯಕ ಸಿದ್ ಶ್ರೀರಾಮ್ ಸಂಗೀತ ರಸಸಂಜೆ ವೇಳೆ ಸಾವಿರಾರು ಜನರು ತೊಂದರೆ ಅನುಭವಿಸಿದರು.

2

ಜೋರು ಗಾಳಿಗೆ ವೇದಿಕೆಯ ಪಕ್ಕದಲ್ಲಿದ್ದ ಎರಡೂ ಸ್ಪೀಕರ್ ಟವರ್‌ಗಳು ನೆಲಕ್ಕುರುಳಿದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಯುವ ದಸರಾ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

3

ಮುಕ್ತ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಮಳೆ ಮತ್ತು ಗಾಳಿಯ ಹೊಡೆತಕ್ಕೆ ಪ್ರೇಕ್ಷಕರು ಪರದಾಡಿದ್ದು, ಕೆಲವರು ಕುರ್ಚಿಗಳನ್ನೇ ಆಸರೆಯಾಗಿ ಹಿಡಿದುಕೊಂಡು ನಿಲ್ಲಬೇಕಾಯಿತು.