
ಗಾಯಕ ಸೋನು ನಿಗಮ್ ತಮ್ಮ ಎಡಗೈ ಉಂಗುರದ ಬೆರಳಿನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಆಪರೇಷನ್ ಟೇಬಲ್ ಮೇಲೆ ಮಲಗಿಕೊಂಡೇ ಮೊಹಮ್ಮದ್ ರಫಿ ಅವರ ಹಾಡನ್ನು ಹಾಡಿದ್ದಾರೆ.
ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಡಾ. ನೀಲೇಶ್ ಸತ್ಭಾಯಿ ಅವರು ಸೋನು ನಿಗಮ್ ಅವರ ಅಭಿಮಾನಿಯಾಗಿದ್ದು, ಆಪರೇಷನ್ ವೇಳೆ ಹಾಡುಗಳನ್ನು ಪ್ಲೇ ಮಾಡಿದ್ದರಿಂದ ಈ ಅಪರೂಪದ ಕ್ಷಣ ನಡೆದಿದೆ.
ಸೋನು ನಿಗಮ್ ಅವರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ತಮ್ಮ ಸಂಧಿವಾತ ಸಮಸ್ಯೆಗೆ ಚಿಕಿತ್ಸೆ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ.